ದಿಟ್ಟಹೆಣ್ಣು ಋತಿಕಾ ಗೋಯಲ್.

ದಿಟ್ಟಹೆಣ್ಣು ಋತಿಕಾ ಗೋಯಲ್.

ಅಪಘಾತವಾಗಿ ಗಾಯಾಳುಗಳು ಪಕ್ಕದಲ್ಲಿ ಬಿದ್ದಿದ್ದರೂ ತಮಗೇಕೆ ಉಸಾಬರಿ ಎಂದು ಮಾನವೀಯತೆ ಮರೆತು ಹೋಗುವ ಬೆಂಗಳೂರಿನಂತಹ ನಗರದಲ್ಲಿ,  ತಾನು ಹೆಣ್ಣು,ಒಬ್ಬಂಟಿ,ಅಬಲೆ ಎಂಬುದನ್ನೆಲ್ಲಾ ಮರೆತು, ಕೆಚ್ಚೆದೆಯಿಂದ  ಅಕ್ರಮ ಗೋಸಾಗಣಿಕೆಯನ್ನು ತಡೆದು, ಅಕ್ರಮ ಗೋಸಾಗಾಣಿಕೆ ಮಾಡುವವರ ಬೆದರಿಕೆಗೂ ಬಗ್ಗದೆ ಗೋಸಂರಕ್ಷಣೆ ಮಾಡಿದ ದಿಟ್ಟಹೆಣ್ಣು ಋತಿಕಾ ಗೋಯಲ್.

ಅವರೊಂದಿಗಿನ ಸಂವಾದದ ಝಲಕ್ ಇಲ್ಲಿದೆ.

೧. ನಿಮ್ಮ ಕಿರು ಪರಿಚಯ?

ರಿತಿಕಾ: ನಮಸ್ಕಾರ. ನನ್ನ ಹೆಸರು ರಿತಿಕಾ. ನಾನು ಹುಟ್ಟಿದ್ದು, ಬೆಳೆದದ್ದು ಬೆಂಗಳೂರಿನಲ್ಲಿ. ಕಾರ್ಪೊರೇಟ್ ಸಂಸ್ಥೆಯೊಂದರಲ್ಲಿ ಉದ್ಯೋಗಿ ಕಾರ್ಯ ನಿರ್ವಹಿಸುತ್ತಿದ್ದೆ. ಈಗ ಸ್ವಯಂ ಸೇವಕಿಯಾಗಿ ಕರ್ತವ್ಯ ಮಾಡುತ್ತಿದ್ದೇನೆ. ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾದಿಂದ ಅನಿಮಲ್ ವೆಲ್ಪೇರ್ ಆಫಿಸರ್ ತರಬೇತಿಯನ್ನು ಇತ್ತೀಚೆಗೆ ನಾನು ಪೂರೈಸಿದ್ದೇನೆ. ನನ್ನ ಏಳನೆಯ ತರಗತಿಯಿಂದಲೂ ಪ್ರಾಣಿಗಳ ರಕ್ಷಣೆ ಮಾಡುವುದು ನನ್ನ ಹವ್ಯಾಸವಾಗಿದ್ದು, ಈ ಸಂಬಂಧಿತ ಕಾರ್ಯದಲ್ಲಿ ಕಳೆದ ೩ ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ.

೨.  ಇತ್ತೀಚಿಗೆ ಬೆಂಗಳೂರಿನಲ್ಲಿ  ಗೋ ಕಳ್ಳ ಸಾಗಣೆಯನ್ನು ಯಶಸ್ವಿಯಾಗಿ ತಡೆದು, ತಪ್ಪಿತಸ್ತರ ಮೇಲೆ ಎಫ್‌ಐಆರ್ ದಾಖಲಾಗುವಂತೆ ಮಾಡಿದ್ದೀರಿ. ಅಭಿನಂದನೆಗಳು. ಆ ಬಗ್ಗೆ ತಮ್ಮ ಅನುಭವವನ್ನು  ಹೇಳಬಹುದೇ?

ರಿತಿಕಾ: ಪ್ರಾಣಿ ದಯಾ ಕಾನೂನು ಉಲ್ಲಂಘನೆ ಹಾಗೂ ಪ್ರಾಣಿಗಳಿಗೆ ನಿರ್ದಯವಾಗಿ ಹಿಂಸೆ ನೀಡುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಈ ಕುರಿತಂತೆ ನಾನು ಹೆಚ್ಚಿನ ಆಸಕ್ತಿ ವಹಿಸಿದ್ದೇನೆ. ಪ್ರಾಣಿಗಳ ಪೋಷಣೆ ಹಾಗೂ ರಕ್ಷಣೆ ಕುರಿತಾಗಿ ಹೆಚ್ಚಿನ ಜ್ಞಾನವಿಲ್ಲದ್ದರಿಂದ ಹಾಗೂ ಪ್ರಾಣಿಗಳ ಕುರಿತಾಗಿ ಸಹಾನುಭೂತಿಯ ಕೊರತೆಯಿಂದಾಗಿ ದಿನದಿಂದ ದಿನಕ್ಕೆ ಪ್ರಾಣಿಗಳ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ಇದಕ್ಕಾಗಿ ಅಪಾಯದಲ್ಲಿದ್ದ ಪ್ರಾಣಿಗಳನ್ನು ರಕ್ಷಿಸುವ ಸಲುವಾಗಿ ಕಾನೂನಿನ ಪ್ರಕಾರ ಪೊಲೀಸರಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ಇದೇ ಪ್ರಥಮ ಬಾರಿಗೆ ಮಹಿಳೆಯೊಬ್ಬಳು ಪೊಲೀಸ್ ಠಾಣೆಗೆ ತೆರಳಿ ಐಪಿಸಿ, ಪಿಸಿಎ, ಮೋಟಾರ್ ವೆಹಿಕಲ್ ಆಕ್ಟ್ ಹಾಗೂ ಟ್ರಾನ್ಸಪೋರ್ಟೇಶನ್ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದು. ಅಂತಿಮವಾಗಿ ಸಾಗಾಣೆಯಾಗುತ್ತಿದ್ದ ಗೋವುಗಳ ಹತ್ಯೆ ತಡೆಯುವುದು ತಡೆಯುವುದಾಗಿತ್ತು.

೩. ಗೋ ರಕ್ಷಣಾ ಕಾರ್ಯಕ್ಕೆ ನಿಮಗೆ ಧೈರ್ಯ ಸ್ಫೂರ್ತಿ ಹೇಗೆ ಬಂತು?

ರಿತಿಕಾ: ಗೋವು ಸೇರಿದಂತೆ ಪ್ರಾಣಿಗಳನ್ನು ಸಹಾನುಭೂತಿಯಿಂದ ಕಾಣುವುದು ನನ್ನ ತಂದೆ ನನಗೆ ಕಲಿಸಿಕೊಟ್ಟಿದ್ದಾರೆ. ಪ್ರಮುಖವಾಗಿ ಡಿಸ್ಕವರಿ ಚಾನಲ್‌ನಲ್ಲಿ ಪ್ರಾಣಿಗಳ ಕುರಿತಾಗಿ ನೋಡಿದ್ದು ಮತ್ತಷ್ಟು ಕಲಿಯಲು ಸಾಧ್ಯವಾಯಿತು. ಮನುಷ್ಯನಿಗೇ ಪಾಠ ಕಲಿಸಬಲ್ಲಂತಹ ಬುದ್ದಿವಂತ ಜಾನುವಾರುಗಳಿದ್ದರೂ, ಅವುಗಳು ಮಾನವನ ದೌರ್ಜನ್ಯಕ್ಕೆ ಸಿಲುಕಿ ಹತ್ಯೆಯಾಗುತ್ತಿರುವುದು ದುರಂತ. ಈ ತಪ್ಪುಗಳನ್ನು ಸರಿಪಡಿಸಬಹುದಾಗಿದ್ದು, ನಮ್ಮಂತೆಯೇ ಪ್ರಾಣಿಗಳಿಗೂ ಬದುಕುವ ಹಕ್ಕಿದೆ ಎನ್ನುವುದನ್ನು ಅರಿಯಬೇಕಿದೆ.

೪. ಯಾವುದಾದರೂ ಸಂಸ್ಥೆಯೊಂದಿಗೆ ತೊಡಗಿಸಿಕೊಂದಿದ್ದೀರಾ?

ರಿತಿಕಾ: ಪ್ರಸ್ತುತ ಪೀಪಲ್ಸ್ ಫಾರ್ ಕ್ಯಾಟಲ್ ಇಂಡಿಯಾ ಆ್ಯಂಡ್ ಅನಿಮಲ್ ಬೋರ್ಡ್ ಆಫ್ ಇಂಡಿಯಾ ಸಂಸ್ಥೆಯೊಂದಿಗೆ ತೊಡಗಿಸಿಕೊಂಡಿದ್ದೇನೆ.

೫. ಗೋ ವಧೆ, ಕಳ್ಳ ಸಾಗಣೆಯನ್ನು ತಡೆಯಲು ಪ್ರಸ್ತುತ ಕಾನೂನುಗಳಲ್ಲಿ ಇರುವ ಅವಕಾಶಗಳೇನು? 

ರಿತಿಕಾ: ಪ್ರಸ್ತುತ ರಾಜ್ಯದಲ್ಲಿ ಅಕ್ರಮ ಗೋ ಸಾಗಣೆ ಹಾಗೂ ವಧೆಯನ್ನು ತಡೆಗಟ್ಟಲು ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ಸಹಕಾರ ಬೇಕಿದೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಮಾದರಿಯಾಗಿ ಅಂತಹುದ್ದೇ ದಾರಿಯಾಗಬೇಕು. ಅಕ್ರಮ ಗೋ ಸಾಗಾಣೆಯನ್ನು ತಡೆಗಟ್ಟಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕಾನೂನಿನ ಕೆಲವು ಅಂಶಗಳನ್ನು ಪ್ರತ್ಯೇಕವಾಗಿ ಹೇಳುತ್ತೇನೆ.

೬. ಕಾನುನಿನಲ್ಲಿ ಅವಕಾಶಗಳಿದ್ದರೂ ಪ್ರಾಯೋಗಿಕವಾಗಿ ಎದುರಾಗಬಹುದಾದ ಸವಾಲುಗಳು ಯಾವುವು?

ರಿತಿಕಾ: ದಾಖಲೆಯಾಗಿರುವ ಅಂಕಿ ಅಂಶಗಳ ಮಾಹಿತಿಯಿನ್ವಯ ಹೇಳುವುದಾದರೆ, ಶೇ.೯೯.೯ ರಷ್ಟು ಮಂದಿ ಪೊಲೀಸರು ಹಾಗೂ ಪೊಲೀಸ್ ಠಾಣೆಗಳು ಈ ವಿಚಾರಗಳ ಬಗ್ಗೆ ಎಚ್ಚರಿಕೆ ವಹಿಸುತ್ತಿಲ್ಲ. ಎಷ್ಟು ವೇಗವಾಗಿ ಜಾನುವಾರುಗಳು ಕಳ್ಳತನವಾಗುತ್ತವೋ, ಅಷ್ಟೇ ವೇಗವಾಗಿ ಅವುಗಳನ್ನು ಹಿಡಿಯಲು ಸಾಧ್ಯವಿದೆ. ಜಾನುವಾರು ಕಳ್ಳರು ಎಷ್ಟು ವೇಗವಾಗಿ ಅವುಗಳನ್ನು ಕದಿಯುತ್ತಾರೋ, ಅದನ್ನು ಹಿಡಿಯಬೇಕಾದವರು ಅಷ್ಟೇ ನಿಧಾನವಾಗಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನಗಳು ನಡೆಯುವುದೇ ಹೆಚ್ಚು. ಅದೃಷ್ಟವಶಾತ್ ಈ ಪ್ರಕರಣದಲ್ಲಿ ಹಾಗಾಗಲಿಲ್ಲ.

೭. ಅಂತಹ ತುರ್ತು ವೇಳೆಯಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ಏನು ಮಾಡಬಹುದು? 

ರಿತಿಕಾ: ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ೧೦೦ಕ್ಕೆ ಡಯಲ್ ಮಾಡಿ, ನೀವಿರುವ ವಾಟ್ಸಪ್ ಲೊಕೇಶನ್‌ನ ಚಿತ್ರವನ್ನು ಕಳುಹಿಸಿದರೆ, ತುರ್ತು ವೇಳೆ ಸಹಾಯಕ್ಕೆ ಮುಂದಾಗಲು ಸಹಕಾರಿಯಾಗುತ್ತದೆ. ಆರೋಪಿಗಳ ಜೊತೆಯಲ್ಲಿ ಯಾವುದೇ ರೀತಿಯ ಸಂಭಾಷಣೆ ಮಾಡದೇ ನಿರ್ಲಪ್ತರಾಗಿ ಈ ಕೆಲಸ ಮಾಡಿ. ಇದಕ್ಕಾಗಿ ಮಾರ್ಗದರ್ಶನ ಮಾಡಲು ಹಲವು ಮಂದಿಯಿದ್ದಾರೆ ಎನ್ನುವುದನ್ನು ಅರಿತಿರಿ.

೮ . ಯಾವುದಾದರೂ ಸಂಸ್ಥೆಗಳಿಂದ ಶೀಘ್ರ ಸಹಾಯ ದೊರೆಯಬಹುದೇ?

ರಿತಿಕಾ: ಪ್ರಸ್ತುತ ಇಲ್ಲ. ಅದು ಈ ಕಾರ್ಯ ಮಾಡುವವರ ಬದ್ದತೆ ಹಾಗೂ ಧೈಯವನ್ನು ಅವಲಂಭಿಸಿರುತ್ತದೆ.

೯. ಯಶಸ್ವಿಯಾಗಿ ತಡೆದು ನಂತರ ಮಾಡಲೇಬೇಕಾದ ಕಾರ್ಯಗಳು ಏನು? ಫಾಲೋ ಅಪ್?

ರಿತಿಕಾ: ಈ ವಿಚಾರ ಅಥವಾ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಅಲೆಯುವುದು ಇರುವುದಿಲ್ಲ. ಇದಕ್ಕಾಗಿ ನ್ಯಾಯವಾದಿ ಹಾಗೂ ಪಬ್ಲಕ್ ಪ್ರಾಸಿಕ್ಯೂಟರ್‌ರನ್ನು ಅವಲಂಭಿಸುವುದು ಅಗತ್ಯವಿಲ್ಲ. ಯಾವುದಾದರೂ ಒಂದು ಉತ್ತಮ ಸಂಘಟನೆಯೊಂದಿಗೆ ಸಂಪರ್ಕ ಹೊಂದಿ, ಈ ಸಂಬಂಧಿತ ಪ್ರಕತಣದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಬೇಕಷ್ಟೆ. ಆದರೆ ಪ್ರಮುಖವಾಗಿ ಈ ಪ್ರಕರಣಗಳಲ್ಲಿ ಧಾರ್ಮಿಕ ಹಾಗೂ ರಾಜಕೀಯದ ಥಳುಕು ಹಾಕುವುದು ಅಷ್ಟು ಸೂಕ್ತವಲ್ಲ.

೧೦. ಯಾವುದಾದರೂ ಸಂಸ್ಥೆಗಳು ನಿಮ್ಮ ಸಾಹಸಕ್ಕೆ ಸ್ಪಂದನೆ, ಮೆಚ್ಚುಗೆ ನೀಡಿವೆಯೇ ? ಏನನ್ನಿಸುತ್ತಿದೆ?

ರಿತಿಕಾ: ಜಾನುವಾರನ್ನು ಪ್ರೀತಿಸುವ ಮಂದಿ ಈ ವಿಚಾರದಲ್ಲಿ ನನಗೆ ಅತ್ಯಂತ ಹೆಚ್ಚಿನ ಸಹಾಯ ಹಾಗೂ ಸಹಕಾರ ನೀಡಿದ್ದಾರೆ. ಈ ಕುರಿತಂತೆ ಎನ್‌ಜಿಒಗಳು ಜಾನುವಾರುಗಳ ರಕ್ಷಣಾ ಕಾರ್ಯಕ್ಕೆ ಮುಂದಾಗಬೇಕು. ಇದು ನಿರ್ಲಕ್ಷ್ಯ ಹಾಗೂ ದೌರ್ಜನ್ಯಕ್ಕೊಳಗಾದ ಪ್ರಾಣಿಗಳ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

೧೧. ಗೋವಂಶ ರಕ್ಷಣೆಯ ವಿಚಾರದಲ್ಲಿ ನಾಡಿನಾದ್ಯಂತ ಜಾಗೃತಿ ಮೂಡಿಸುತ್ತಿರುವ ಮತ್ತು ಅಂತಹ ಅನೇಕ ಯೋಜನೆಗಳನ್ನು ಮಾಡಿರುವ ಶ್ರೀರಾಮಚಂದ್ರಾಪುರಮಠದ ರಾಘವೇಶ್ವರಭಾರತೀ ಶ್ರೀಗಳು ಇತ್ತೀಚಿಗೆ ನಿಮಗೆ ಸನ್ಮಾನಿಸಿ ಪ್ರೋತ್ಸಾಹಿಸಿದ್ದಾರೆ. ಇದರ ಬಗ್ಗೆ ಎನೆನುಸುತ್ತದೆ?

ರಿತಿಕಾ: ಈ ವಿಚಾರದಲ್ಲಿ ನನಗೆ ದೊರೆತ ಬೆಂಬಲ ಹಾಗೂ ಸಹಕಾರ ನನಗೆ ಅತ್ಯಂತ ಅಚ್ಚರಿ ಹಾಗೂ ಸಂಸತವನ್ನುಂಟು ಮಾಡಿದೆ. ಸಮಾಜದಲ್ಲಿ ಇಂತಹ ಕಾರ್ಯಗಳಿಗೆ ಈ ರೀತಿಯ ಸಹಕಾರ ಹಾಗೂ ಬೆಂಬಲ ಅತ್ಯಗತ್ಯವಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಜಾನುವಾರುಗಳು ನಾಶವಾಗುತ್ತಿರುವ ಸಂದರ್ಭ ಇಂತಹ ಕಾರ್ಯಗಳನ್ನು ಮಾಡಲು ಎಲ್ಲರೂ ಮುಂದೆ ಬರಬೇಕು. ಭಾರತೀಯ ಜಾನುವಾರು ಹಾಗೂ ಗೋ ತಳಿಗಳು ಅತ್ಯಂತ ಶ್ರೇಷ್ಠವಾಗಿದ್ದು, ಇವುಗಳನ್ನು ಉಳಿಸುವ ಕಾರ್ಯ ಮಾಡುತ್ತಿರುವ ಪ್ರತಿಯೊಬ್ಬರನ್ನೂ ನಾನು ಗೌರವಿಸುತ್ತೇನೆ. ಇಂತಹ ಕಾರ್ಯ ಮಾಡುವ ಎಲ್ಲರನ್ನೂ ನಾನು ಹುರಿದುಂಬಿಸಲು ಇಚ್ಛಿಸುತ್ತೇನೆ.

೧೨. ನಿಮ್ಮ ಮುಂದಿನ ಗುರಿ?

ರಿತಿಕಾ: ಗೋವು ಸೇರಿದಂತೆ ಜಾನುವಾರುಗಳ ರಕ್ಷಣೆ ಹಾಗೂ ಪೋಷಣೆ ಮಾಡುವುದು ನನ್ನ ಗುರಿಯಾಗಿದ್ದು, ಈ ಕುರಿತಂತೆ ಜ್ಞಾನ ಹಾಗೂ ಮಾಹಿತಿ ನೀಡುವ ಕಾರ್ಯ ಮಾಡುತ್ತೇನೆ. ಜಾನುವಾರುಗಳ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಿ ಅವುಗಳಿಗೂ ಇರುವ ಬದುಕುವ ಹಕ್ಕನ್ನು ಎತ್ತಿ ಹಿಡಿಯಲು ಯತ್ನಿಸುತ್ತೇನೆ. 

೧೩. ಒಟ್ಟಾರೆ ಸಮುದಾಯಕ್ಕೆ ಏನನ್ನು ಹೇಳಲು ಬಯಸುತ್ತೀರಿ?

ರಿತಿಕಾ: ನೀವು ಹಾಗೂ ನಾನು ಎಲ್ಲರಿಗೂ ಉತ್ತಮವಾಗಿ ಬದುಕುವುದು ಹಕ್ಕು. ನಾವು ಹಾಗೂ ನಮ್ಮವರ ಉಳಿವಿಗಾಗಿ ಹೆಚ್ಚು ಹೆಚ್ಚು ಸಕ್ರಿಯರಾಗಬೇಕಾದ ಅವಶ್ಯಕತೆ ಇದೆ. ಈ ಪ್ರಪಂಚದಲ್ಲಿ ಕೂಡಿ ಬಾಳುವುದನ್ನು ಕಲಿಯೋಣ.  ಎಲ್ಲರನ್ನೂ ಗೌರವಿಸುವುದನ್ನು ಕಲಿಯೋಣ.

Untitled174

Related

Share

FightForRight

Visitors