ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪು ನಮ್ಮ ಭಾರತೀಯ ಆಹಾರದ ಅವಿಭಾಜ್ಯ ಅಂಗ. ಅನೇಕರು ಇದನ್ನ ಕೇವಲ ಶೋಗಾಗಿ ಮಾತ್ರ ಬಳಕೆ ಮಾಡುತ್ತಾರೆಂದು ತಪ್ಪು ತಿಳಿದಿರುತ್ತಾರೆ.

ಇದು ಶೋಗಷ್ಟೇ ಅಲ್ಲ, ಆರೋಗ್ಯಕ್ಕೂ ಸಾಕಷ್ಟು ಒಳ್ಳೆಯದು…
* ಕೊತ್ತಂಬರಿ ಸೊಪ್ಪಿನ ಜ್ಯೂಸ್ ಮಾಡಿ ಕುಡಿಯಬಹುದು. ಅಥವಾ, ಆಹಾರದಲ್ಲಿ ಕೊತ್ತಂಬರಿಯನ್ನ ಹೆಚ್ಚು ಬಳಕೆ ಮಾಡಿದರೆ ಕಿಡ್ನಿಯಲ್ಲಿರುವ ಕಲ್ಲನ್ನ ಕರಗಿಸಲು ಸಹಾಯವಾಗುತ್ತದೆ. ಕಿಡ್ನಿಯಲ್ಲಿ ಕಲ್ಲು ಸೇರಿಕೊಳ್ಳದಂತೆ ನಿಯಂತ್ರಿಸುತ್ತದೆ.
* ಕೊಲೆಸ್ಟ್ರಾಲ್ ತಗ್ಗಿಸುತ್ತದೆ. ಬಿಪಿ, ಶುಗರನ್ನು ನಿಯಂತ್ರಣದಲ್ಲಿಡುತ್ತದೆ.
* ದೇಹದಲ್ಲಿ ಸೇರಿರುವ ವಿಷ ಪದಾರ್ಥಗಳನ್ನು ಗುಡಿಸಿಹಾಕುತ್ತದೆ. ಇದರಿಂದಾಗಿ ಮರೆವು, ಮಕ್ಕಳಾಗದ ತೊಂದರೆ, ಹುಟ್ಟಿನಿಂದಲೂ ಮಗುವಿಗೆ ಕಾಣಿಸಿಕೊಳ್ಳುವ ತೊಂದರೆಗಳು ನಿವಾರಣೆಯಾಗುತ್ತವೆ.
* ನರಗಳನ್ನು ಶಾಂತಗೊಳಿಸಿ, ಒತ್ತಡವನ್ನು ತಗ್ಗಿಸುತ್ತದೆ. ಮಾನಸಿಕ ಸ್ವಾಸ್ಥ್ಯವನ್ನ ಕಾಪಾಡುತ್ತದೆ.
* ಮೂತ್ರನಾಳದ ತೊಂದರೆಗಳನ್ನು ನಿವಾರಿಸುತ್ತದೆ.
* ಮೂಳೆಗಳ ಆರೋಗ್ಯಯುತ ಬೆಳವಣಿಗೆಗೆ ಸಹಕರಿಸುವುದಲ್ಲದೆ, ಗಾಯವಾದಾಗ ಬೇಗ ರಕ್ತ ಹೆಪ್ಪುಗಟ್ಟಲು ಸಹಕರಿಸುತ್ತದೆ.
* ಅನೀಮಿಯಾ ತಡೆಗಟ್ಟಿ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ.

Related

Share

FightForRight

Visitors